ಇಲ್ಲಿಯವರೆಗಿನ ಚಟುವಟಿಕೆಗಳು

ಶೈಕ್ಷಣಿಕ ನೆರವು

ಸರ್ಕಾರಿ ಶಾಲೆಗಳ ಮಕ್ಕಳಿಗೆ ಶಾಲಾ ಚೀಲಗಳು ಮತ್ತು ಅಧ್ಯಯನ ಸಾಮಗ್ರಿಗಳನ್ನು ವಿತರಿಸುವ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಉತ್ತೇಜನ ನೀಡಿದೆ.

ಆರೋಗ್ಯ ಸೇವೆಗಳು

ಅಗತ್ಯವಿರುವವರಿಗೆ ರಕ್ತದಾನ ಅಭಿಯಾನಗಳು ಮತ್ತು ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸುವ ಮೂಲಕ ಸಾರ್ವಜನಿಕ ಆರೋಗ್ಯ ಸುಧಾರಣೆಗೆ ಶ್ರಮಿಸಿದೆ.

ನೈಸರ್ಗಿಕ ವಿಕೋಪ ಪರಿಹಾರ

ಕೇರಳದ ವಯನಾಡು ಪ್ರದೇಶದಲ್ಲಿ ಭೂಕುಸಿತದಿಂದ ಸಂಕಷ್ಟಕ್ಕೊಳಗಾದ ಜನರಿಗೆ ಸಹಾಯ ಹಸ್ತ ನೀಡುವಂತಹ ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಂಡಿದೆ.

ಯುವಜನರ ಸಬಲೀಕರಣ

ಶೈಕ್ಷಣಿಕ ಮಾರ್ಗದರ್ಶನ ಮತ್ತು ಸಮುದಾಯ ಉಪಕ್ರಮಗಳ ಮೂಲಕ ಯುವಕರನ್ನು ಬೆಂಬಲಿಸಿ, ಸಮಾಜಕ್ಕೆ ಕೊಡುಗೆ ನೀಡಲು ಪ್ರೇರೇಪಿಸಿದೆ.

ಕನ್ನಡ ನಾಡು-ನುಡಿ ಸೇವೆ

ಕನ್ನಡ ಭಾಷೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಹಲವಾರು ಚಳುವಳಿಗಳು, ಜಾಗೃತಿ ಅಭಿಯಾನಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ.

ಸಾಮಾಜಿಕ ಸ್ಪಂದನ

ರಾಜ್ಯದ ರೈತ, ಕಾರ್ಮಿಕ, ಸೈನಿಕ, ಶಿಕ್ಷಕ, ಮಹಿಳೆಯರ ಕಷ್ಟಗಳಿಗೆ ವಿಶೇಷ ಕಾಳಜಿಯಿಂದ ಸ್ಪಂದಿಸುತ್ತಾ, ನೆರವಾಗುತ್ತಾ ಬಂದಿದೆ.