ಕನ್ನಡವೇ ಜಾತಿ, ಕನ್ನಡವೇ ಧರ್ಮ ಎಂಬ ಮಾನವೀಯ ಹಾದಿಯನ್ನು ರಾಘವೇಂದ್ರ ಅವರು ಅನುಸರಿಸುತ್ತಿದ್ದಾರೆ. ಜಾತಿ, ಧರ್ಮ, ಹೆಸರಿನಲ್ಲಿ ದ್ವೇಷ ಅಸೂಯೆಗೆ ಅವಕಾಶ ನೀಡದೆ, ಪ್ರೀತಿ, ವಿಶ್ವಾಸ, ನಂಬಿಕೆಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ನಾಡಿನ ಕನ್ನಡಪರ ಕಾಳಜಿಯುಳ್ಳ ಹಿರಿಯರು, ಉತ್ಸಾಹಿ ಯುವಕರು ಹೆಮ್ಮೆ ಮತ್ತು ಅಭಿಮಾನದಿಂದ ಸಂಘಟನೆಯ ಭಾಗವಾಗಿದ್ದಾರೆ. ವಿವಿಧ ಹಿನ್ನೆಲೆಯಿಂದ ಬಂದಿರುವ ಸಂಘಟನೆಯ ಪದಾಧಿಕಾರಿಗಳು ಮತ್ತು ಸದಸ್ಯರು ಸೇರಿ ‘ಗಜಸೇನೆ’ಯು ರಾಘವೇಂದ್ರ ಅವರ ನೇತೃತ್ವದಲ್ಲಿ ಒಂದು ಅಪೂರ್ವವಾದ ಕುಟುಂಬವಾಗಿ ಬೆಳೆದಿದೆ.